"ರಂಗ ಶಂಕರ"ದಲ್ಲಿ ನಾಟಕವನ್ನು ನೋಡಬೇಕೆಂಬ
ಬಯಕೆಗೆ ಸಮಯ ಕೂಡಿ ಬಂದಿದ್ದು
ಮೊನ್ನೆ ಶುಕ್ರವಾರ ೨೭ನೇ ತಾರೀಕಿನಂದು. ಅವತ್ತು
ಪ್ರದರ್ಶಿಸಲ್ಪಡುತ್ತಿದ್ದ ನಾಟಕ- "ಮಳೆ ನಿಲ್ಲುವವರೆಗೆ". ಸ್ನೇಹಿತರೊಡನೆ
ಈ ನಾಟಕ ನೋಡಬೇಕೆಂದು
ಮೊದಲೇ ನಿರ್ಧರಿಸಿ, ಟಿಕೆಟ್ನ್ನು ಬುಕ್
ಮಾಡಿದ್ದೆ. ಅಂತೂ ಅವತ್ತು ಕೆಲಸದಿಂದ
ಚೂರು ಬೇಗನೆ ಬಂದು ರಂಗ
ಶಂಕರ ತಲುಪಿದಾಗ ಏನೊ ಸಮಾಧಾನ & ಖುಷಿ.
ನಿರ್ದೇಶನ:
ಡಾ. ಬಿ ವಿ ರಾಜಾರಾಂ
ರಚನೆ: ಎಲ್.
ಎಸ್. ಸುಧೀಂದ್ರ
ಅಭಿನಯ:
ಬಿ ಸುರೇಶ್, ಮಂಜುನಾಥ ಹೆಗಡೆ,
ರವೀಂದ್ರ, ಮತ್ತಿತರರು.
ಹೆಸರೇ
ಸೂಚಿಸುವ ಹಾಗೆ, ಮಳೆ ನಿಲ್ಲುವತನಕ
ಒಂದು ಮನೆಯಲ್ಲಿಯ ೫ ಜನರು ಮಾಡುವ
ಮನೋರಂಜನಾ ಪ್ರಹಸನ. ಒಬ್ಬ ನಿವೃತ್ತ
ನ್ಯಾಯಾಧೀಶ ಹಾಗೂ ಇಬ್ಬರು ನಿವೃತ್ತ
ನ್ಯಾಯವಾದಿ ಸ್ನೇಹಿತರು ಕಾಲಹರಣೆಗಾಗಿ ಬೆಟ್ಟದ ಮೇಲಿರುವ ನ್ಯಾಯಾಧೀಶನ
ಮನೆಯಲ್ಲಿ ಸೇರುವುದು ಗುಂಡು ಹಾಕುವುದು, ಮಾತು-ಕಥೆಯಾಡುವುದು
& ಹರಟೆಗಾಗಿ
"ನ್ಯಾಯಾಲದ ಆಟ "ವಾಡುವುದು ರೂಢಿ. ಹಾಗೆ ಮನೆಗೆ
ಯಾರಾದರೂ ಬಂದರೆ ಅವರನ್ನು ಆಟಕ್ಕೆ
ಆಹ್ವಾನಿಸಿ, ಸೇರಿಸಿಕೊಂಡು ಆಟ ಆಡುವುದು ಅವರ
ವಾಡಿಕೆ.
ಒಂದು
ದಿನ ಜೋರಾಗಿ ಮಳೆ ಬರುವ
ಸಮಯದಲ್ಲಿ ಇದೆ ರೀತಿ ಮಾತಾಡುತ್ತಾ,
ಗುಂಡು ಹಾಕುತ್ತಿದ್ದಾಗ, ಆಕಸ್ಮಾತ್ ಕಾರು ಕೆಟ್ಟುಹೋಗಿ, ಮನೆ
ದೀಪ ಉರಿಯುವದನ್ನು ಕಂಡು ಆನಂದ ಎಂಬ
ಸೇಲ್ಸ್ಮನ್ ಮನೆಗೆ ಬರುತ್ತಾನೆ.
ಅವನನ್ನು ಉಪಚರಿಸಿ, ಆಟಕ್ಕೆ ಕರೆಯುತ್ತಾರೆ. ಆನಂದ
ಕೂಡ ಒಪ್ಪಿ ಆಟವಾಡಲು ಅಣಿಯಾಗುವನು.
ಆನಂದನನ್ನು ಅಪರಾಧಿಯಾಗಿಸಿ ಅವನ ಪರ & ವಿರೋಧವಾಗಿ
ಒಬ್ಬಬ್ಬ ನ್ಯಾಯವಾದಿ ಗುರುತಿಸಿ ಆಟ
ಆರಂಭಿಸುವರು.
ಆನಂದನ ವಿಚಾರಣೆ ನಡೆಸುವ ರಾಮಣ್ಣ
ಅವನ ವೈಯಕ್ತಿಕ ಹಾಗೂ ವೃತ್ತಿ ಹಿನ್ನಲೆಯನ್ನು
ಕೆದಕುತ್ತಾ ಸಾಗುವನು, ಆನಂದನು ಕೂಡ ತಾನೇನು
ಕಮ್ಮಿ ಎನ್ನುವಂತೆ ರಾಮಣ್ಣನ ಪ್ರಶ್ನೆಗಳನ್ನು ವಿಶ್ವಾಸದಿಂದ
ಗುಂಡಿನ ಮತ್ತಿನಲ್ಲಿಯೇ ಎದರಿಸುವನು. ವಕೀಲ ರಾಮಣ್ಣ ಚಾಣಾಕ್ಷತೆಯಿಂದ
ಆನಂದನ ಹುಳುಕನ್ನು ಅವನಿಗೆ ಅರಿವಿಲ್ಲದಂತೆಯೇ ಹೊರಹಾಕಿಸುವನು. ಆನಂದನು ಕೊನೆಗೆ ತನ್ನ ಅಪರಾಧವನ್ನು
ಒಪ್ಪಿಕೊಂಡು, ಆಟದ ಸ್ವರೂಪವನ್ನು ನೋಡಿ,
ನಿಜ ಜೀವನ & ಆಟವನ್ನು ಬೆರಿಸಿ ಹೆದರಿ,
ಆಟದ ಗೊಡವೆ ಸಾಕೆಂದು, ಮಳೆ
ನಿಂತಿರುವುದನ್ನು ತಿಳಿದು ಓಡಿ ಹೋಗುತ್ತಾನೆ. ಆನಂದ ಹೋದ ಸ್ವಲ್ಪ
ಸಮಯದಲ್ಲೇ, ಮತ್ತೆ ಮಳೆ ಬೀಳಲಾರಂಭಿಸುತ್ತದೆ.
ಅದೇ ಸಮಯಕ್ಕೆ ಆನಂದನ ಹೆಂಡತಿಯು
ಅವರ ಮನೆಗೆ ಬರುತ್ತಾಳೆ. ಈ
ನ್ಯಾಯವಾದಿಗಳು ಮತ್ತೊಮ್ಮೆ ಆಟವಾಡಲು ಸಿದ್ದರಾಗುತ್ತಾರೆ.
ಆನಂದಾಗಿ
ಮಂಜುನಾಥ ಹೆಗಡೆ ಮತ್ತು ವಕೀಲ
ರಾಮಣ್ಣನಾಗಿ ಬಿ ಸುರೇಶ್ ಗಮನ
ಸೆಳೆಯುತ್ತಾರೆ. ಅವರ ಹಾವ-ಭಾವ,
ಮಾತು, ನಟನೆ ಮನೆಗೆ ಬಂದ
ಮೇಲೂ ನನ್ನು ಕಾಡುತಿತ್ತು. ಉಳಿದ
ಪಾತ್ರಧಾರಿಗಳು ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ.
ನಾಟಕ ಸಾಗುತಿದ್ದಂತೆಯೇ ಅವರ ಈ ಆಟ
ನಿಜವೆನ್ನಿಸುವ ಮಟ್ಟಿಗೆ ವೀಕ್ಷಕರನ್ನು ಗೊಂದಲಕ್ಕೆ
ಸಿಕ್ಕಿಸುವುದು. ಮಿತ ಹಾಸ್ಯ ಹಿತವಾಗಿದೆ.
ಮಳೆಯ
ಬರುವುದನ್ನು ತಿಳಿಸುವ ಹಿನ್ನಲೆ ಧ್ವನಿ-ಬೆಳಕು ಇನ್ನೂ ಚೆನ್ನಾಗಿದಿದ್ದರೆ
ನಾಟಕ ಇನ್ನಷ್ಟು ಪ್ರಭಾವಿಯಾಗುತಿತ್ತೇನೋ??
ನೋಡಿ,
ಈ ಆಟವನ್ನು.
ಖಂಡಿತ
'ಮಳೆ ನಿಲ್ಲುವವರೆಗೆ; ಪ್ರಯೋಗ ನಿಮ್ಮನ್ನು ಮನರಂಜಿಸುತ್ತದೆ.
No comments:
Post a Comment