Sunday, June 15, 2014

ಊರು ನೀರಾಗಿದೆ
ಬಾಳು ಹಾಳಾಗಿದೆ

ಬಿತ್ತಿದ ಬೆಳೆ ಬಿದ್ದು ಹೊಗಿವೆ
ಉತ್ತುವ ನೆಲ ಕೊಚ್ಚಿ ಹೊಗಿದೆ
ರೈತ ಕರಳು ಕಿತ್ತು ಬಂದಿದೆ
ಕಣ್ಣೀರು ರಕ್ತವಾಗಿ ಹರಿದಿದೆ

ಮನೆ ಮಠಗಳು ಕುಸಿದಿವೆ
ದನ-ಕರು-ಕುರಿಗಳು ಸತ್ತಿವೆ
ಸಂಸಾರಗಳು ಬೀದಿ ಪಾಲಾಗಿವೆ
ಜನಗಳ ಬದುಕು ಬರಡಾಗಿದೆ

ಕನಸುಗಳು ಕರಿಗಿವೆ
ಮನಸ್ಸುಗಳು ಮುರಿದಿವೆ
ಭಾವನೆಗಳು ಬತ್ತಿವೆ
ಆಸೆಗಳು ಕಮರಿ ಹೊಗಿವೆ

ಕತ್ತಲೆಯ ತೂರಿ ಬೆಳಕು ಹರಿವಂತೆ
ಬಾಳ ಬಂಜೆತನ ನೀಗಿ, ಜೀವನ
ಉತ್ಸಾಹ ಚಿಮ್ಮಿಸಲು, ಒಲವುಗಳು
ಕಾದಿವೆ ಧನ-ಧಾನ್ಯ-ಸೂರಿನಾಸರೆಗಾಗಿ
ಇಂದಿನ ಉಳಿವಿಗಾಗಿ ನಾಳೆಯ ಭರವಸೆಗಾಗಿ.


--ರವಿ ಕುಲಕರ್ಣಿ, ಹುಬ್ಬಳ್ಳಿ.

No comments:

Post a Comment