ಬದಲಾವಣೆಯ ತಂಗಾಳಿ ಬೇಕು ಬಾಳಿನಲ್ಲಿ
ಬದಲಾವಣೆ- ಜೀವನದ ಒಂದು ಸಾರ್ವತ್ರಿಕ, ಸಾರ್ವಕಾಲಿಕ, ಅವಶ್ಯಕ ಹಾಗೂ ಅನಿವಾರ್ಯ ಘಟ್ಟ. ದಿನಗಳು ಸವೆದಂತೆ ಕಾಲದ ಸಮಾನತೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ, ಪ್ರಾಣಿ, ವಸ್ತು ಮತ್ತು ಕ್ರಿಯೆಗಳ ಎಲ್ಲಾ ವಿಧದ ಮಹತ್ತರವಾದ ಹಾಗೂ ಅಗತ್ಯವಾದ ರೂಪಾಂತರ ಅಪೇಕ್ಷಣೀಯವಾದದು. ಪ್ರತಿಯೊಂದರ ಉಳಿವಿಗಾಗಿ ಮತ್ತು ಬೆಳವಣೆಗಾಗಿ ಬದಲಾವಣೆ ಹೊಂದುವುದು ಸ್ವಾಭಾವಿಕವಾದಂತಹ ಗುಣಧರ್ಮ. ಬದಲಾವಣೆ ಸರ್ವತೋಮುಖವಾಗಿರಬೇಕು ಹಾಗೂ ಸಮಾಜದ ಮತ್ತು ವೈಯಕ್ತಿಕ ಬದುಕಿನ ಅಭಿವೃದ್ಧಿ ಪರವಾಗಿರಬೇಕು. ಆರೋಗ್ಯಕರವಾದ, ಸ್ನೇಹಪರವಾದ ಬದಲಾವಣೆ ಜೀವನವನ್ನು ಪ್ರಗತಿ ಪಥದ ಶಿಖರವನ್ನೇರಲು ಪೂರಕವಾಗಿರುವಂತಿರಬೇಕು. ಜ್ಞಾನ ಭಂಡಾರ ಹಿಗ್ಗಿಸಲು, ಮನಸ್ಸಿನ ಅಂಧಕಾರ ತೊಲಗಿಸಲು, ವಿಶಾಲ ಮನೋಧರ್ಮ ಬೆಳೆಯಲು, ಸಂಸಾರ ನೌಕೆ ನಿರಾತಂಕವಾಗಿ ಮುಂದೆ ಸಾಗಲು, ಧನಾತ್ಮಕವಾದ ಬದಲಾವಣೆ ಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಬದುಕ ಸಾಗರದಲ್ಲಿ ಯಶಸ್ಸಿನ ದಡ ತಲುಪಲು ಬದಲಾವಣೆಯ ಸಿಹಿಯಾದ ತಂಗಾಳಿ ಬೀಸಬೇಕು.
-ರವಿ ಕುಲಕರ್ಣಿ, ಹುಬ್ಬಳ್ಳಿ.
No comments:
Post a Comment