ನೀನ್ಯಾರೊ ನಾನ್ಯಾರೊ
ಮುಖ ಪರಿಚಯವಿಲ್ಲ
ನೆಂಟಸ್ತನದ ಬಂಧವಿಲ್ಲ
ಆದರೂ ಅರಿಯದ ಆಕರ್ಷಣೆ.
ದಿನಗಳು ಕಳೆದಂತೆ,ಗೆಳೆತನದ
ತಂಗಾಳಿ ಬಿಸಿ ಹತ್ತಿರವಾದೆವು
ಕಾಲ ಸರಿದಂತೆ , ಪ್ರೀತಿ
ಮಮತೆಯ ಕಂಪು ಹರಡಿ
ಸ್ನೇಹದ ಪರಿಧಿಯ ದಾಟಿ
ಸಹೋದರತೆಯ ಬೆಳಕು ಮೂಡಿ
ನೀನಾದೆ ನನ್ನ ಅಕ್ಕರೆಯ ಅಕ್ಕ.
ಅರಳುವ ತಾವರೆಯಂತೆ
ನಗುವಿರಲಿ ಸದಾಕಾಲ, ನಿನ್ನ
ಮುಗ್ದ ಮೊಗದ ತುಂಬ.
--ರವಿ ಕುಲಕರ್ಣಿ, ಹುಬ್ಬಳ್ಳಿ.
No comments:
Post a Comment